ಪರಿವೇಶಣ

Syndicate content
ಸಂಪದ ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ. Sampada is a portal that caters to Kannadigas, the Kannada people around the world.
Updated: 1 week 1 day ago

ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

February 22, 2010 - 20:04

ಶಿವು ಬರ್ತ್ ಡೇ

'ಚುಂಗ್ಸ್'

ಈರುಳ್ಳಿ ಹೂವು.

ಇನ್ಸುಲಿನ್ ಗಿಡ

ಆಂಡ್ರಾಯ್ಡ್ ಫೋನು

 

 

ದುಂಬಿಯರಸಿದ ಹೂವು

February 8, 2010 - 20:44

ದುಂಬಿಯರಸಿದ ಹೂವು
ಸಹಜ ಪ್ರಕೃತಿ ಚೆಲುವು
ಸ್ವರ್ಣ ಪರ್ಣ ದಳ.
ನೇಸರನ ಹೊಳಪು
ಜ್ವಾಲೆಯ ಸೊಬಗು
ಸವಿನಗೆಯ ಕುಸುಮ.

 

ಮುಂದೆ ಓದಿ...

ಒಂದಷ್ಟು ಚಿತ್ರಗಳು

January 30, 2010 - 17:24

ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾಕುತ್ತಿರೋಣ ಎಂದುಕೊಂಡಿದ್ದೆ. ಅದಕ್ಕೆ ಪೂರಕವಾಗಿ ನೆನಪಿನಲ್ಲಿ ಮಾಸಿಹೋಗಿದ್ದ ಹವ್ಯಾಸವನ್ನು ಇತ್ತೀಚೆಗೆ ಮತ್ತೆ ಪ್ರಾರಂಭಿಸಲು ಸಾಧ್ಯವಾಯಿತು. ಕೈಯಲ್ಲಿ ಲೆನ್ಸ್ ಹಿಡಿದಾಗ ಕೆಲವೊಮ್ಮೆ ಅಲ್ಲಿಲ್ಲಿ ಕೇಳಿಬಂದ ಪ್ರತಿಕ್ರಿಯೆಗಳು ಹೊಸ ಐಡಿಯಗಳಿಗೆ ಬಾಗಿಲು ತೆರೆಯವುದುಂಟು. ಹೀಗಾಗಿ ಇಲ್ಲಿವೆ ಚಿತ್ರಗಳು - ಹೇಗಿವೆ? ಇಷ್ಟ ಆಯ್ತ? ಇಷ್ಟ ಆಗಲಿಲ್ಲವ? ಇದೇ ಚಿತ್ರಗಳನ್ನು ತೆಗೆಯುವುದಿದ್ದರೆ ನಿಮ್ಮ ಐಡಿಯಗಳೇನು? ಬರೆದು ತಿಳಿಸುತ್ತೀರಲ್ವ?

ನನ್ನದೊಂದು ಕನ್ನಡಿ

 

ಮುಂದೆ ಓದಿ...

ಅಂಕೋಲೆ ಗಿಡ

January 26, 2010 - 13:28

ಅಂಕೋಲೆ ಗಿಡ ಅಥವ Alangium decapetalum.

ಫೋಟೋ ಇವತ್ತು ಬೆಳಿಗ್ಗೆ ತೆಗೆದದ್ದು.


 

ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ

January 3, 2010 - 21:49

ರವೀಂದ್ರ ಕಲಾಕ್ಷೇತ್ರದ ಬಳಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮೇಳ ನಡೆಯುತ್ತಿದೆ. ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದಾರೆ.


ನಿನ್ನೆ ಶನಿವಾರ ನಾವು ಇಲ್ಲಿಗೆ ಹೋಗಿದ್ದೆವು. ಮುಖ್ಯವಾಗಿ ಮೈಸೂರು ಪ್ರಸಾರಾಂಗ, ಹಂಪಿ ವಿಶ್ವವಿದ್ಯಾನಿಲಯದ ಸ್ಟಾಲುಗಳಿಗೆ ಭೇಟಿ ಕೊಡದೆ ಬರುವಂತಿಲ್ಲ. ಏಕೆಂದರೆ ಅಲ್ಲಿರುವ ಸುಮಾರು ಪುಸ್ತಕಗಳು ಚೆಂದ ಇರೋದಷ್ಟೇ ಅಲ್ಲ, ಬೆಲೆ ನೋಡಿದರೆ ಶಾಕ್ ಆಗುವುದು ಗ್ಯಾರಂಟಿ. ಐದು ರೂಪಾಯಿ, ನಾಲ್ಕು ರೂಪಾಯಿ, ಏಳು ರೂಪಾಯಿ... ಹೀಗೆ! ಅದೂ ಒಳ್ಳೆಯ ಪುಸ್ತಕಗಳು (ಮತ್ತೆಲ್ಲೂ ಸಿಗದ ಪುಸ್ತಕಗಳು ಕೂಡ).

 

ಮುಂದೆ ಓದಿ...

ವಿಜಯ ಕರ್ನಾಟಕಕ್ಕೆ ಬರೆದ ಸಾಲುಗಳು

December 28, 2009 - 01:05

(ಈ ಚುಟುಕು ಬರಹ ಭಾನುವಾರ ಡಿಸೆಂಬರ್ ೨೭ ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. "ಕನಸಿನ ಉದ್ಯೋಗ"ದ ಬಗ್ಗೆ ಬರೆಯಬೇಕೆಂದು ಕೇಳಿದ್ದರು. ನಾನು ಬರೆದದ್ದು ಇಗೋ ನಿಮ್ಮ ಮುಂದಿದೆ)

ನನ್ನ ಕನಸಿನ ಉದ್ಯೋಗ ಕನಸು ಕಾಣುವುದು. ಅರೆ, ಇದೇನು? ಎಂದನಿಸಬಹುದು ನಿಮಗೆ. ಹೊಸತನ್ನು ಕನಸು ಕಾಣುತ್ತ ಅದಕ್ಕೆ ರೂಪ ಕೊಡುವುದು ನನ್ನ ಉದ್ಯೋಗ. ಹಣ ಮಾಡಬೇಕು, ದೊಡ್ಡ ಮನುಷ್ಯನಾಗಬೇಕು ಎಂಬ ಕನಸುಗಳಲ್ಲ. ಬದಲಿಗೆ ಹೀಗೊಂದು ಹೊಸತು - ಅದನ್ನು ಬೇರಾರೂ ಮಾಡಿರಕೂಡದು, ಮುಖ್ಯವಾಗಿ ಎಲ್ಲರಿಗೂ ಅದರ ಉಪಯೋಗವಾಗಬೇಕು!

 

ಮುಂದೆ ಓದಿ...

ಕಾಡಿದ ಪದ

December 26, 2009 - 15:38

ಸುಮ್ಮನೆ ವೈಷ್ಣವನೆಂದಿರಿ - ಪರ -
ಬ್ರಹ್ಮ ಸುಜ್ಞಾನವನರಿಯದ ಮನುಜನ

ಮುಖವ ತೊಳೆದು ನಾಮವಿಟ್ಟವನಲ್ಲದೆ
ಮಿಕ್ಕ ಶಾಸ್ತ್ರಂಗಳ ನೋಡಿದನೆ?
ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ
ಭಕುತಿಯ ರಸದೊಳು ಮುಳುಗಿದನೇನಯ್ಯ

 

ಮುಂದೆ ಓದಿ...

ಹೀಗೊಂದು ದೀಪ

December 18, 2009 - 13:42

ಮೊಬೈಲ್ ಫೋನಿನ ಕ್ಯಾಮೆರದಲ್ಲಿ ತೆಗೆದದ್ದು. ಹಕ್ಕಿಯ ಕೊಕ್ಕಿನಲ್ಲಿದ್ದ ಹೂ ಯಾವಾಗ ಜಾರಿ ಕೆಳಗೆ ಬೀಳುವುದೋ ಎಂಬಂತಿತ್ತು.

 

ಮುಂದೆ ಓದಿ...

ಟ್ವಿಟ್ಟರ್ ಮೊಬೈಲ್ ಹೊಸ ಆವೃತ್ತಿ

December 9, 2009 - 10:51

ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕ ಬಳಸಿ ಟ್ವಿಟ್ಟರ್ ಉಪಯೋಗಿಸುವವರಿಗೆ ಟ್ವಿಟ್ಟರ್ ಹೊಸತೊಂದು ಆವೃತ್ತಿಯನ್ನು ಹೊರತಂದಿದೆ. ಈ ಹಿಂದೆ ಇದ್ದ ಆವೃತ್ತಿಗಿಂತ ಹೆಚ್ಚಿನ ಸೌಲಭ್ಯಗಳಿವೆ ಇದರಲ್ಲಿ.

ಈ ಆವೃತ್ತಿ Android, iPhone ಮುಂತಾದ ಸ್ಮಾರ್ಟ್ ಫೋನುಗಳಲ್ಲಿ ಚೆಂದ ಉಪಯೋಗಕ್ಕೆ ಬರುತ್ತದೆ. ಬ್ರೌಸರಿನಲ್ಲಿ ಕೆಳಗಿನ ವಿಳಾಸ ಟೈಪ್ ಮಾಡಿದರೆ ಸಿಗುತ್ತದೆ ಈ ಆವೃತ್ತಿ:

http://mobile.twitte...

 

 

ಗೂಗಲ್ ಗಾಗಲ್ಸ್

December 9, 2009 - 10:40

ಗೂಗಲ್ ಲ್ಯಾಬ್ಸ್ ಎಂದಿನಂತೆ ತನ್ನ ಹೊಸತುಗಳ ಸುರಿಮಳೆಯಲ್ಲಿ ಹೊಸತೊಂದು ಕ್ರಾಂತಿ ಹುಟ್ಟಿಸುವ ತಂತ್ರಜ್ಞಾನ ಹೊರತಂದಿದೆ. ಅದರ ಹೆಸರು 'ಗೂಗಲ್ ಗಾಗಲ್ಸ್'. ಇದನ್ನು ಬಳಸಿ ಇನ್ನು ಮುಂದೆ ನೀವು ಫೋಟೋ ಹೊಡೆದು ಸರ್ಚ್ ಮಾಡಬಹುದು. ಅಥವ ಜಿ ಪಿ ಎಸ್ ಬಳಸಿ ನೀವಿರುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಸದ್ಯಕ್ಕೆ ಈ ತಂತ್ರಾಂಶ ಗೂಗಲ್ Android ಮೊಬೈಲ್ ಬಳಸುತ್ತಿರುವವರಿಗೆ ಮಾತ್ರ ಲಭ್ಯ. ಅದೂ Android 1.6+ (Donut ಅಥವ Eclair) ಬಳಸುತ್ತಿರುವವರಿಗೆ.

 

ಮುಂದೆ ಓದಿ...